top of page
Search

ಶತಮಾನದ ತ್ಯಾಗದ ಕಥೆ

ಸ್ನೇಹವೆಂಬುದು ಸದಾ ಘಮ-ಘಮಿಸುವ ಒಂದು ಚಿರಾಯು ಪುಷ್ಪದಂತೆ. ಅಲ್ಬರ್ಟ ಫ್ಯಾಂಟ್ರಾ ಎಂಬ ನಿಸ್ವಾರ್ಥಿ, ತ್ಯಾಗಮಯಿ ಸ್ನೇಹಿತನ ಕಥೆ ನಿಜಕ್ಕೂ ಪ್ರೇರಣಾದಾಯಕ.


ಕ್ರಿಸ್ಟಿಯಾನೋ ರೋನಾಲ್ಡೋ ಜಗತ್ತು ಕಂಡ ಪುಟ್‌ಬಾಲ್ ಜಗತ್ತಿನ ದಂತಕಥೆ ಲಿಯೋನೆಲ್‌ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೋನಾಲ್ಡೋ ಎಂಬ ಎರಡು ಹೆಸರುಗಳನ್ನು ಹೊರತುಪಡಿಸಿ ಪುಟ್ ಬಾಲ್ ಆಟವನ್ನು ಕಲ್ಪನೆ ಕೂಡ ಮಾಡಲಾಗದಷ್ಟು ಆ ಕ್ರೀಡೆಯನ್ನು ಈ ಇಬ್ಬರು ಆಟಗಾರರು ಉತ್ತುಂಗಕ್ಕೆ ಕೊಂಡೊಯ್ದಿರುವವರು. ಪುಟ್‌ ಬಾಲ್ ಆಡದೇ ಇರುವಂತಹ ಅನಾರೋಗ್ಯ ಸ್ಥಿತಿಯನ್ನು ತಲುಪಿ ಪುಟ್ ಬಾಲ್ ದಂತಕಥೆಯಾಗಿ ಬೆಳೆದು ವಿಶ್ವ ಚಾಂಪಿಯನ್‌ ಆದ‌ ಲಿಯೋನೆಲ್‌ ಮೆಸ್ಸಿ ಕಥೆಯು ಕೋಟ್ಯಾನುಗಟ್ಟಲೇ ಜನರಿಗೆ ಪ್ರೇರಣೆಯಾಗಿದ್ದು ಒಂದು ಕಡೆಯಾದರೆ ಕ್ರಿಸ್ಟಿಯಾನೋ ರೋನಾಲ್ಡೋ ಒಂದು ತ್ಯಾಗದ ಸಂಕೇತವಾಗಿ ಹೊರಹೊಮ್ಮಿದ್ದೇ ಇನ್ನೂ ರೋಚಕ. ಹೌದು ಇಂದು ಮಾತನಾಡುತ್ತಿರುವುದು ಅಲ್ಬರ್ಟ ಫ್ಯಾಂಟ್ರಾ ಎಂಬ ತ್ಯಾಗಿಯ ಕಥೆ.


Pic Source: Medium.com
Pic Source: Medium.com

ಎಲ್ಲಾ ಕ್ಷೇತ್ರಗಳ ಎಷ್ಟೋ ಯಶಸ್ಸಿನ ಕಥೆಗಳ ಸಾರಾಂಶದಲ್ಲಿ ರಕ್ತಸಂಬಂಧಿಗಳ ಹೀಯಾಳಿಕೆ, ಸ್ನೇಹಿತರ ಸಹಾಯ ಹಸ್ತದ ಬಗ್ಗೆ ಕೇಳಿರುವ, ಓದಿರುವ ಸಂಗತಿಗಳಿವೆ. ಸ್ನೇಹವೆಂಬುದು ಸದಾ ಘಮ-ಘಮಿಸುವ ಒಂದು ಚಿರಾಯು ಪುಷ್ಪದಂತೆ. ಕ್ರಿಸ್ಟಿಯಾನೋ ರೋನಾಲ್ಡೋ ಕೂಡ ಸ್ನೇಹಿತನ ಸಹಾಯದಿಂದಲೇ ಈ ಮಟ್ಟಕ್ಕೆ ಬೆಳೆದಿರುವುದೆದೆಂದರೆ ನೀವು ನಂಬಲೇಬೇಕು. ಟಿ.ವಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ ಅಲ್ಬರ್ಟ ಫ್ಯಾಂಟ್ರಾ ಎಂಬ ಹೆಸರಿನ ಪ್ರಸ್ತಾಪವಾದಾಗ ಕ್ರಿಸ್ಟಿಯಾನೋ ರೋನಾಲ್ಡೋ ತಮ್ಮ ಗೆಳೆಯನಿಗೆ ತಾವು ಈಗ ಬದುಕುತ್ತಿರುವ ಐಷಾರಾಮಿ ಜೀವನವನ್ನೇ ತನ್ನ ಗೆಳೆಯನಿಗೂ ತನ್ನದೇ ದುಡಿಮೆಯಲ್ಲಿ ಒದಗಿಸುತ್ತಿರುವದಾಗಿ ತಿಳಿಸುತ್ತಾನೆ. ಕ್ರಿಸ್ಟಿಯಾನೋ ರೋನಾಲ್ಡೋ ಹಾಗೂ ಅಲ್ಬರ್ಟ ಫ್ಯಾಂಟ್ರಾ ಬಾಲ್ಯದ ಸ್ನೇಹಿತರು, ಒಂದೇ ಪುಟ್‌ಬಾಲ್ ಕ್ಲಬ್‌ ಗೇ ಆಡುವ ತಂಡದ ಸದಸ್ಯರೂ ಆಗಿದ್ದರೂ ಈ ಇಬ್ಬರೂ ಆಟಗಾರರು ಬಾಲ್ಯದಲ್ಲಿದ್ದಾಗ ಪುಟ್ಬಾಲ್‌ ಜಗತ್ತಿನ್ಲಲಿ ಸ್ಕೌಟ್ ಗಳು ಮುಂದಿನ ಪೀಳಿಗೆಯ ಪ್ರತಿಭೆಗಳ  ನಿರಂತರ ಹುಡುಕಾಟದಲ್ಲಿದ್ದರು. ಸ್ಕೌಟಗಳೆಂದರೆ ವೃತ್ತಿಪರ ಕ್ರೀಡೆಗಳ ಕಿರಿಯ ಆಟಗಾರರ ಕೌಶಲ್ಯ, ಪ್ರತಿಭೆಗಳನ್ನು ಗುರುತಿಸಿ ಮುಂದಿನ ಪೀಳಿಗೆಯ ಅತ್ಯುತ್ತಮ ಆಟಗಾರರನ್ನು ಹುಡುಕಿ, ಜಗತ್ತಿಗೆ ಪರಿಚಯಿಸುವವರು. ಸ್ಕೌಟಗಳು ಆಯ್ಕೆ ಮಾಡಿದಂತಹ ಆಟಗಾರರನ್ನು ದೊಡ್ಡ ದೊಡ್ಡ ಪುಟ್‌ ಬಾಲ್‌ ಕ್ಲಬ್‌ ಗಳು ಅಗತ್ಯ ತರಬೇತಿ ನೀಡಿ ತಮ್ಮ ತಂಡಗಳಲ್ಲಿ ಸೇರಿಸಿಕೊಳ್ಳುವ ಕಾರ್ಯ ಆಗಿನಿಂದಲೂ ನಡೆದು ಬಂದಿದೆ, ಈ ಪ್ರಕ್ರಿಯೆ ಈಗಿನ IPL ನಲ್ಲಿ ಸಹ ನೋಡಬಹುದು.ಾ



Pic Source: Medium.com
Pic Source: Medium.com

Sporting Lisbon ಪೊರ್ಚುಗಲ್‌ ನ ಪ್ರಸಿದ್ದ ಪುಟ್‌ ಬಾಲ್‌ ಅಕಾಡೆಮಿಯ ಸ್ಕೌಟ ಒಬ್ಬರು ಕ್ರಿಸ್ಟಿಯಾನೋ ರೋನಾಲ್ಡೋ ಹಾಗೂ ಅಲ್ಬರ್ಟ ಫ್ಯಾಂಟ್ರಾರ ಆಟವನ್ನು ವಿಕ್ಷೀಸಲು ಬಂದು Sporting Lisbon ಅಕಾಡೆಮಿಯಲ್ಲಿ ಒಂದೇ ಒಂದು ಪ್ರತಿಭೆಯ ಅಗತ್ಯವಿದ್ದು ಯಾರು ಈ ಪಂದ್ಯದಲ್ಲಿ ಹೆಚ್ಚು ಗೋಲುಗಳನ್ನು ಗಳಿಸುವರೋ ಅವರಿಗೆ ಆ ಸ್ಥಾನ ನೀಡುವುದಾಗಿ ಘೋಷಿಸುತ್ತಾರೆ. ಆ ಪಂದ್ಯದಲ್ಲಿ ಕ್ರಿಸ್ಟಿಯಾನೋ ರೋನಾಲ್ಡೋ ಮೊದಲನೇ ಗೋಲು ಗಳಿಸುತ್ತಾರೆ ಅಲ್ಬರ್ಟ ಫ್ಯಾಂಟ್ರಾ ಕೂಡ ತಮ್ಮ ಮೊದಲನೇ ಗೋಲು ಗಳಿಸುತ್ತಾರೆ. ಪಂದ್ಯದ ಸಮಯ ಮುಕ್ತಾಯವಾಗುವ ಹಂತದಲ್ಲಿ ಅಲ್ಬರ್ಟ ಫ್ಯಾಂಟ್ರಾ ಚೆಂಡನ್ನು ಗೋಲ್‌ ಕೀಪರ ಸಮೀಪ ತಲುಪಿಸಿ ತನಗೆ ಕ್ಲಿಯರ್ ಶಾಟ್‌ ಇದ್ದರೂ ಸಹ ಉದ್ದೇಶಪೂರ್ವಕವಾಗಿ ಕ್ರಿಸ್ಟಿಯಾನೋ ರೋನಾಲ್ಡೋಗೆ ಬಾಲ್ ಪಾಸ್‌ ಮಾಡುತ್ತಾರೆ, ಸಿಕ್ಕ ಅವಕಾಶ ಬಳಸಿಕೊಂಡ ರೋನಾಲ್ಡೋ ತಮ್ಮ ಎರಡನೇ ಗೋಲು ಗಳಿಸಿ ಅಕಾಡೆಮಿಗೆ ಆಯ್ಕೆಯಾಗುತ್ತಾರೆ. ಪಂದ್ಯದ ಬಳಿಕ ರೋನಾಲ್ಡೋ ತನ್ನ ಗೆಳೆಯನಿಗೆ ನಿನಗೆ ಅಷ್ಟು ಸುಲಭ ಅವಕಾಶವಿದ್ದರೂ ಯಾಕೇ ಬಾಲ್‌ ನ್ನು ಪಾಸ್‌ ಮಾಡಿದೆ ಎಂದು ಕೇಳಿದಾಗ ಫ್ಯಾಂಟ್ರಾ ಉತ್ತರಿಸುತ್ತಾನೆ You are better than me. ಆ ಪಂದ್ಯದ ಬಳಿಕ ಫ್ಯಾಂಟ್ರಾರ ಪುಟ್‌ ಬಾಲ್‌ ವೃತ್ತಿಜೀವನವೇ ಕೊನೆಗಂಡಿತು ಆದರೇ ಪುಟ್‌ಬಾಲ್ ಜಗತ್ತಿನ ದಂತಕಥೆಯ ಮೊದಲ ಪುಟ ಪ್ರಾರಂಭವಾಯಿತು. ಫ್ಯಾಂಟ್ರಾರ ಈ ತ್ಯಾಗದ ಕಥೆಯು ಹೊರಬಿದ್ದಿದ್ದೆ ಒಂದು ರೋಚಕ. ನಿರುದ್ಯೋಗಿ ಫ್ಯಾಂಟ್ರಾರ ಐಷಾರಾಮಿ ಜೀವನವನ್ನು ಕಂಡ ಪತ್ರಕರ್ತರೊಬ್ಬರು ಈ ಕುರಿತು ಪ್ರಶ್ನಿಸಿದಾಗ ಫ್ಯಾಂಟ್ರಾ ಇದೆಲ್ಲ ಕ್ರಿಸ್ಟಿಯಾನೋ ರೋನಾಲ್ಡೋ ನನಗೆ ಕೊಟ್ಟಿದ್ದು ಎಂದು ಹೇಳಿದಾಗ. ಈ ಸಂದರ್ಭದಲ್ಲಿ ವಿನ್‌ಸ್ಟನ್‌ ಚರ್ಚಿಲ್‌ ರ “ನಾವು ಪಡೆಯುವದರಿಂದ ನಾವು ಜೀವನ ನಡೆಸುತ್ತೇವೆ. ನಾವು ನೀಡುವದರಿಂದ ನಾವು ಜೀವನವನ್ನು ರೂಪಿಸಿಕೊಳ್ಳುತ್ತೇವೆ”. ಮಾತು ಎಷ್ಟು ಸತ್ಯವೆನಿಸುತ್ತದೆ.


ವರ್ತಮಾನದ ಸ್ನೇಹ ಸಂಬಂಧಗಳು ನಿಜಕ್ಕೂ ನಿಸ್ವಾರ್ಥತೆಯನ್ನು ಮೆರೆಯುತ್ತಿವೆಯೆ? ಸ್ನೇಹಿತನ ಏಳಿಗೆಯನ್ನು ಮುಂದೆ ಸಂಭ್ರಮಿಸಿ ಹಿಂದೆ ಅಸೂಯೆ ಪಡುವ ಸ್ನೇಹಿತರ ಸಂಖ್ಯೆ ಈ ಕಥೆಯಿಂದ ಕಡಿಮೆಯಾಗುವುದೇ? ರಕ್ತಸಂಬಂಧಕ್ಕಿಂತ ಸ್ನೇಹ ಸಂಬಂಧದ ಬೆಲೆ ಯಾವಾಗಲೂ ಶ್ರೇಷ್ಠವಾದ್ದು ಹಾಗೂ ಅಜರಾಮರವಾದ್ದು. ಕ್ರಿಸ್ಟಿಯಾನೊ ಮತ್ತು ಆಲ್ಬರ್ಟ್ ಅವರ ಕಥೆಯಿಂದ ಕಲಿಯಬಹುದಾದ ಪಾಠವೆಂದರೆ, ನಮ್ಮ ಕಷ್ಟದ ಸಮಯದಲ್ಲಿ ನಮಗಾಗಿ ನಿಂತು ಸಹಾಯ ಹಸ್ತ ಚಾಚಿದ ಜನರನ್ನು, ನಮ್ಮನ್ನು ಬೆಂಬಲಿಸಿದವರನ್ನು ನಾವು ಎಂದಿಗೂ ಮರೆಯಬಾರದು, ಅವರಿಗೆ ಎಂದಿಗೂ ಕೃತಜ್ಞರಾಗಿರಬೇಕು ಹಾಗೂ ನಮಗಿಂತ ಪ್ರತಿಭಾವಂತ ಗೆಳೆಯನ ಏಳಿಗೆಗೆ ಎಂದೆಂದೂ ಹಿಂಜರಿಯಬಾರದು.

 
 
 

Comments


Post: Blog2_Post
  • Twitter
  • LinkedIn

©2021 by prabhuwritesince2021. Proudly created with Wix.com

bottom of page