top of page
Search

Anonymous ಎಂಬ Real Hero(s)?ಗಳು.

Updated: Jun 17, 2021

12 ನೇ ಜೂನ್‌ - 2016 ರಂದು ಫ್ಲೋರಿಡಾದ ಓರ್ಲಾಂಡೊ ನಲ್ಲಿನ Gay Club ಮೇಲೆ ISIS ಉಗ್ರ ಸಂಘಟನೆಯ ಉಗ್ರರು ಗುಂಡಿನ ದಾಳಿ ನಡೆಸಿ 49 ಜನರ ದಾರುಣ ಹತ್ಯೆ ಮಾಡುತ್ತಾರೆ. ಪೋಲಿಸ್‌ ಇಲಾಖೆಯು ಇನ್ನೂ ಪ್ರಾಥಮಿಕ ತನಿಖೆ ನಡೆಸುತ್ತಿರುವಾಗಲೇ 14 ನೇ ಜೂನ್-2016‌ ರಂದು ಘಟನೆಗೆ ಮುಖ್ಯ ಕಾರಣವಾಗಿದ್ದ Social Media Recruitment Campaign ನ 200 Twitter Account ಗಳನ್ನು Hack ಮಾಡಿ ಅವರ ಎಲ್ಲ ವಿವರಗಳನ್ನು ಪ್ರಪಂಚದ ಮುಂದೆ ಇಡಲಾಗುತ್ತೆ. ಹೌದು Anonymous ಎಂಬ Hacktivist ಗಳ ಗುಂಪು. ಈ ಕಾರ್ಯ ಎರಡು ದಿನದಲ್ಲಿ ಮಾಡಿತ್ತು. ಅಸಂಖ್ಯಾತ ಸಿನಿಮಾಗಳಲ್ಲಿ ನಾವು ನಿವೇಲ್ಲರೂ ಅದೆಷ್ಟೋ Hackers ಗಳನ್ನು ನೋಡಿದ್ದೇವೆ, ಒಂದು ಜೀನ್ಸ ಪ್ಯಾಂಟು, ದೊಗಳೆ ಟಿ-ಶರ್ಟು, ಕನ್ನಡಕ, ಸರಿಯಾಗಿ ಬಾಚಿಲ್ಲದ ಕೂದಲು, ಕೈಯಲ್ಲೊಂದು ಲ್ಯಾಪಟಾಪ್‌ ಹಿಡಿದು ಅನಾಮಧೇಯ ಸ್ಥಳದಲ್ಲಿ ಕುಳಿತಿರುವ ವ್ಯಕ್ತಿ. Hacker ಅಂದಾಕ್ಷಣ ನಮ್ಮ ಕಲ್ಪನೆಗೆ ಬರುವ ಸರ್ವೆ ಸಾಮಾನ್ಯ ಚಿತ್ರಣವೇ ಇದು. Hackers ಗಳಲ್ಲಿ ಎರಡು ಪ್ರಕಾರಗಳು ಒಂದು Black Hat Hackers ಮತ್ತು White Hat Hackers. Black Hat Hackers ಗಳು ತಮ್ಮ ಸ್ವಾರ್ಥಕ್ಕಾಗಿ ಜನಸಾಮಾನ್ಯರ Gmail, Bank Details ಗಳನ್ನು Hack ಮಾಡಿ ಹಾನಿ ಮಾಡುವರು White Hat Hackers ಗಳು Ethical Hacking ಸಿದ್ಧಾಂತದ ಮೇಲೆ ಇವರನ್ನು ತಡೆಯವುರು. ಆದರೆ Anonymous ಎಂಬ Hacker ಗಳ ಗುಂಪು ಇವೆರಡಕ್ಕೂ ವಿಭಿನ್ನವಾದದ್ದು. ಪ್ರತಿಫಲಾಪೆಕ್ಷೆ ಇಲ್ಲದೇ ರಾಜಕೀಯವಾಗಿ, ಆರ್ಥಿಕವಾಗಿ ಆಗುವ ಅನ್ಯಾಯಗಳನ್ನು, ಮಕ್ಕಳ ಶೋಷಣೆ, ಹಿಂಸಾಚಾರದ ಹಿಂದಿನ ಕಾಣದ ಕೈಗಳನ್ನು ಬಯಲಿಗೆಳೆದು ಜನಸಾಮಾನ್ಯರ ಮುಂದೆ ಇಡುವರು.




Anonymous ಎಂಬ ವಿಕೇಂದ್ರಿತ ಹ್ಯಾಕರಗಳ ಗುಂಪು ಪ್ರಪಂಚದಾದ್ಯಂತ ಅದೆಷ್ಟೋ ಭ್ರಷ್ಟಾಚಾರ ಅನ್ಯಾಯಗಳನ್ನು ಬಯಲಿಗೆಳೆದಿದೆ. 2003ನೇ ಇಸವಿಯಲ್ಲಿ 4chan.org ಎಂಬ Platform ನಲ್ಲಿ ತಮ್ಮನ್ನು ಪರಿಚಯಿಸಿಕೊಂಡ ಗುಂಪು ಜಗದ್ವಿಖ್ಯಾತವಾಗಿದ್ದು 2008 ರಲ್ಲಿ Church of Scientology ಯ ಒಂದು ವಿಡೀಯೊ ಕ್ಲಿಪ್‌ ನ್ನು YouTube ನಲ್ಲಿ ಅಪಲೋಡ ಮಾಡಿದಾಗ. WikiLeaks ಎಂಬ ಮಾಧ್ಯಮದ ಬಗ್ಗೆ ತಾವು ಈಗಾಗಲೇ ತಿಳಿದಿದ್ದೀರಿ, ಪ್ರಪಂಚದ ಅತಿ ದೊಡ್ಡ ಸ್ಥಾಪಿತ ಮಾಧ್ಯಮ WikiLeaks ಸಂಕಷ್ಟದಲ್ಲಿದ್ದಾಗ ಯಾವುದೇ ಪ್ರತಿಫಲಾಪೆಕ್ಷೆ ಇಲ್ಲದೇ ಇದೇ Anonymous ಗುಂಪು ಅವರನ್ನು ಪಾರು ಮಾಡಿತ್ತು. Anonymous ಕೈಗೊಂಡ ಕೆಲವು ಜವಾಬ್ದಾರಿಯುತ Mission ಗಳ ಬಗ್ಗೆ ತಮಗೆ ಹೇಳಲೆಬೇಕು.


Operation Darknet (2011)



Darknet ಎಂಬ ಇನ್ನೊಂದು Internet Platform ಬಹುತೇಕ ಜನರಿಗೆ ಗೊತ್ತಿಲ್ಲ. Tor ಎಂಬ Browser ನಲ್ಲಿ ಕಾರ್ಯಗತಗೊಳ್ಳುವ Darknet, Internet ನ 90% ಅಧಿಕ ಭಾಗ ಆವರಿಸಿಕೊಂಡಿದೆ. ಇದರಲ್ಲಿ ಮನುಷ್ಯರ ಸಾಗಾಣಿಕೆ (Human Trafficking), ಅಪ್ರಾಪ್ತ ಮಕ್ಕಳ ಅಶ್ಲೀಲ ಚಿತ್ರಗಳ ಚಿತ್ರಣ (Child Pornography), ಆಯುಧಗಳ ಕಳ್ಳಸಂತೆ, ಬಿಟ್‌ ಕಾಯಿನ್‌ ಧಂದೆಯಂತಹ ಸಾವಿರಾರು ಕಾನೂನುಬಾಹಿರ ಚಟುವಟಿಕೆಗಳು Darknet ಮುಖಾಂತರವೇ ನಡೆಯುತ್ತವೆ. 2011 ರಲ್ಲಿ ಸುಮಾರು 1500 Child Pornography ಬಳಕೆದಾರರ ಹೆಸರು, ವಿಳಾಸಗಳನ್ನು Anonymous ಗುಂಪು ಹೊರಹಾಕಿತ್ತು. ಅಪಹರಣಕ್ಕೆ ಒಳಗಾಗಿ ಅಶ್ಲೀಲ ಚಿತ್ರಗಳ ಜಾಲಕ್ಕೆ ಸಿಲುಕಿದ್ದ ಸಾವಿರಾರು ಮಕ್ಕಳು ಸ್ವತಂತ್ರಗೊಂಡುದಲ್ಲದೇ Darknet ನಲ್ಲಿ ಚಾಲ್ತಿಯಲ್ಲಿದ್ದ 40 Child Pornography Website ಗಳು ನಿಷ್ಕ್ರಿಯಗೊಂಡವು. ಇವುಗಳ ಮಾಲೀಕರು, ಕೆಲಸಗಾರರು ಪೋಲಿಸರ ಅತಿಥಿಯಾದರು.


Operation Pay Back (2010)




Visa, MasterCard, PayPal ಎಂಬ ಜಗದ್ವಿಖ್ಯಾತ ಆರ್ಥಿಕ ಸಂಸ್ಥೆಗಳು ಕ್ಷುಲ್ಲಕ ಕಾರಣ ಕೊಟ್ಟು WikiLeaks ಮಾಧ್ಯಮದ ಖಾತಗೆ ಪ್ರಪಂಚದ ಮೂಲೆ-ಮೂಲೆಗಳಿಂದ ಬರುತ್ತಿದ್ದ ದೇಣಿಗೆ ಹಣ (Donations) ಗಳನ್ನು ತಡಹಿಡಿದಿದ್ದವು ಇದರ ಹಿಂದೆ ರಾಜಕೀಯ ಕೈವಾಡವೂ ಇತ್ತು. ಪ್ರಜೆಗಳನ್ನು ರಕ್ಷಿಸಬೇಕಾದ ರಾಜಕೀಯ ನಾಯಕರು, ರಾಜಕೀಯ ಪಕ್ಷಗಳು, ಪೋಲಿಸ್‌ ಇತರೆ ಸಂಸ್ಥೆಗಳು ಭ್ರಷ್ಟಾಚಾರದ ಬೆನ್ನತ್ತಿ ಪ್ರಜೆಗಳನ್ನು ಮೂರ್ಖರನ್ನಾಗಿಸುವವರಿಗೆ ಸಿಂಹ ಸ್ವಪ್ನನಾದ WikiLeaks ಸಂಸ್ಥೆ ಅದೆಷ್ಟೋ ಅಂತರಾಷ್ಟ್ರೀಯ ಹಗರಣಗಳನ್ನು ಬಯಲಿಗೆಳೆದು ಭ್ರಷ್ಟರನ್ನು ಬೆತ್ತಲಾಗಿಸಿದೆ. ಇದೇ ಸಂಸ್ಥೆಯೆ ತೊಂದರೆಗಿಡಾಗಿದ್ದಾಗ ನೆರವಿಗೆ ಧಾವಿಸಿದ್ದು Anonymous ಗುಂಪು. Visa, MasterCard, PayPal ಸಂಸ್ಥೆಗಳ Website ಗಳನ್ನು Hack ಮಾಡಿ WikiLeaks ಗೆ ಬರಬೇಕಾಗಿದ್ದ ಎಲ್ಲ Donation ಗಳನ್ನು ಅವರಿಗೆ ತಲುಪಿಸಿತ್ತು. ಅತ್ಯಂತ ಸುರಕ್ಷಿತ Website ಗಳೆಂದೆ ಪರಿಗಣಿಸಲ್ಪಟ್ಟಿದ್ದ ಈ ಆರ್ಥಿಕ ಸಂಸ್ಥೆಗಳು Operation Pay Back ಮೂಲಕ ಪೇಚಿಗೆ ಸಿಲುಕಿದವು.

.

Mission ISIS (2016)


ಫ್ಲೋರಿಡಾದ ಓರ್ಲಾಂಡೊ ನಲ್ಲಿನ Gay Club ಮೇಲೆ ISIS ಉಗ್ರರು ದಾಳಿ ಮಾಡಿ 49 ಜನರ ಹತ್ಯೆ ಮಾಡುತ್ತಾರೆ. ಘಟನೆಗೆ ಕಾರಣವಾಗಿದ್ದ Twitter ನೇಮಕಾತಿ ಅಭಿಯಾನದ 200 Twitter Account ಗಳನ್ನು Hack ಮಾಡಿ ಅವರ ಎಲ್ಲ ವಿವರಗಳನ್ನು ಪ್ರಪಂಚದ ಮುಂದೆ ಇಡಲಾಗುತ್ತೆ. ಇದರ ಪರಿಣಾಮವಾಗಿ ಸುಮಾರು 20,000 ಸಂದೇಹಾತ್ಮಕ ಅಂದರೆ ISIS ಗೆ ಸೇರಲು ಪ್ರಚೋದಿಸುವ, ಅವರನ್ನು ಬೆಂಬಲಿಸುವ ಸುಮಾರು 20,000 ಸಂದೇಹಾತ್ಮಕ Twitter Account ಗಳನ್ನು ಮುಂದೆ ನಿಷ್ಕ್ರಿಯಗೊಳಿಸಲಾಯಿತು (Deactivated). ಮುಂದೆ ಆಗಬಹುದಾದ ಅದೆಷ್ಟೋ ಅನಾಹುತಗಳನ್ನು Anonymous ಗುಂಪು ತಡೆದಿತ್ತು. ISIS ಗೆ ಒಂದು ಸಂದೇಶವನ್ನು Anonymous ಕಳುಹಿಸಿತು. " ISIS ನಿಮಗೆ ಸುರಕ್ಷಿತ ಸ್ಥಳ ಎಂಬುದೇ ಇನ್ನು ಮುಂದೆ ಇಲ್ಲ, ನಿಮ್ಮನ್ನು ಬೇಟೆಯಾಡಿ ಸರ್ವನಾಶ ಮಾಡುವೆವು ನಿರೀಕ್ಷಿಸಿ.




ಇದಷ್ಟೆ ಅಲ್ಲದೇ Church of Scientology ಯ ವಿಡಿಯೋವನ್ನು ಹೊರಹಾಕಿದ್ದು ಸೇರಿದಂತೆ, ಅದೆಷ್ಟೋ ಮಾನವೀಯ ಕಳಕಳಿಯ Operation ಗಳನ್ನು Anonymous ಗುಂಪು ಮಾಡಿದೆ. ಈ ಗುಂಪು ಎಲ್ಲಿಂದ ಕಾರ್ಯಚಟುವಟಿಕೆ ಮಾಡುತ್ತದೆ?, ಇದರ ನಾಯಕ ಯಾರು?, ಎಷ್ಟು ಜನ ಈ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲಿಯವರೆಗೂ ಯಾರಿಗೂ ಕಂಡು ಹಿಡಿಯಲಾಗಿಲ್ಲ.


ಕೊನೆಯದಾಗಿ


ನಾವು ವೀಕ್ಷಿಸುವ ಸಿನಿಮಾಗಳಲ್ಲಿ ನಾಯಕ ನಟನೊಬ್ಬ ಕಾನೂನು ಕೈಗೆತ್ತಿಕೊಂಡು ಮಾಡುವ ಕೆಲಸಗಳೆಲ್ಲ ನಮಗೆ Thrilling ಅನುಭವ ಕೊಡುತ್ತವೆ. ಆದರೆ ತಮ್ಮ Identity ಯನ್ನು ಬಿಟ್ಟುಕೊಡದೆ ಅನ್ಯಾಯ, ಅಕ್ರಮ, ಭ್ರಷ್ಟಾಚಾರ, ಹಿಂಸಾಚಾರ ನಡೆದಾಗಲೆಲ್ಲ ತಾಂತ್ರಿಕವಾಗಿ, ತಾರ್ಕಿಕವಾಗಿ ಅವನ್ನು ಬಯಲಿಗೆಳೆಯುವ ಈ ಗುಂಪಿನ ಪ್ರತಿಯೊಬ್ಬ ಸದಸ್ಯನನ್ನು Real Hero ಎನ್ನಬಹುದಾ?


Anonymous ನ ಎರಡು ಶಕ್ತಿಶಾಲಿ ಘೋಷಣಾ ವಾಕ್ಯಗಳು


The Corrupt - Fear Us

The Honest - Support Us

The Heroic - Join Us







"We are Anonymous, We are Legion, We do not Forgive, We do not Forget, Expect Us"






 
 
 

3 Comments


Dharmaray Talawar
Dharmaray Talawar
Jun 16, 2021

Super sir, ಇಷ್ಟೆಲ್ಲ ಯಾರೂ ಮಾಡಕ್ಕಾಗದ ಕೆಲಸಗಳನ್ನು ಅವರ ಸ್ವಾರ್ಥಕ್ಕಾಗಿ ಅಲ್ಲದಿದ್ದರು,ಒಳ್ಳೆಯದ್ದಕ್ಕಾಗಿ ಕೆಲಸ ಮಾಡಿ ಹೆಸರು ಹೇಳಿ ಕೊಳ್ಳದೇ ಇರುವ ಅನಾಮಧೇಯ (Anonymous) Hackers ನಿಜವಾದ ಹಿರೋಗಳೆ.......🙏

Like

mangala kengasur
mangala kengasur
Jun 16, 2021

Useful information.

Like

Vinod Karnal
Vinod Karnal
Jun 16, 2021

ಹೊಸ ಸಂಶೋಧನಾತ್ಮಕ ಬರವಣಿಗೆ ತುಂಬಾ ಅದ್ಭುತವಾಗಿದೆ ಸರ್....

Like
Post: Blog2_Post
  • Twitter
  • LinkedIn

©2021 by prabhuwritesince2021. Proudly created with Wix.com

bottom of page