YouTube ಎಂಬ ಕಮರ್ಷಿಯಲ್ ಮಾಯಾಜಾಲ
- Krishnakesari K
- Jun 7, 2021
- 2 min read
Google ಹೊರತುಪಡಿಸಿ ಅತಿ ಹೆಚ್ಚು ಹುಡುಕಾಟಗಳನ್ನು ಹೊಂದುವ ಮಾಧ್ಯಮವೇ 'YouTube' ಈ ಅಂಕಣ ಓದುವ ಮುನ್ನ 16 ಸೆಕೆಂಡುಗಳ ಈ YouTube ವಿಡಿಯೋವನ್ನು ಒಂದು ಬಾರಿ ನೋಡಿ ಬಿಡಿ. https://youtu.be/qsKoT__cmAw How to Open a Door ಎಂಬ ಶಿರ್ಷಿಕೆಯಡಿ 09 ವರ್ಷಗಳ ಹಿಂದೆ YouTube ಗೆ Upload ಆಗಿರುವ ಈ ವಿಡಿಯೋವನ್ನು ಸುಮಾರು 2.2 ಮಿಲಿಯನ್ ಜನ ವೀಕ್ಷಿಸಿದ್ದಾರೆ. YouTube Platform ನಲ್ಲಿ ಸ್ವಂತ ಚಾನೆಲ್ ನ್ನು ಸೃಜಿಸುವುದು ಸಂಪೂರ್ಣ ಉಚಿತ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸ್ವಂತ ಚಾನೆಲ್ ಸೃಜಿಸಿದವನ ಖಾತೆ YouTube Partner Program (YPP) ಮೂಲಕ Monetize ಆಗಬೇಕೆಂದರೆ ಆ ಚಾನೆಲ್ ಕನಿಷ್ಠ 1000 Subscriber ಗಳನ್ನು ಹೊಂದಬೇಕು ಇಲ್ಲವೇ 4000 ಗಂಟೆಗಳ ಸಾರ್ವಜನಿಕ ವಿಕ್ಷಣೆ ಸಮಯದ ಬಳಕೆಯಾಗಿರಬೇಕು. ಈಗ ಮೇಲೆ ತಿಳಿಸಿದ್ದ How to Open a Door ವಿಡಿಯೋ ಅಪಲೋಡ್ ಮಾಡಿದ್ದ ವ್ಯಕ್ತಿ/ಚಾನೆಲ್ ಗೆ ಎಷ್ಟು ಹಣ ಸಂದಾಯವಾಗಿರಬಹುದು? ಯೋಚಿಸಿ. YouTube ಮಾಧ್ಯಮ ಎಷ್ಟು ಖ್ಯಾತಿ ಪಡೆದಿದೆಯೆಂದರೆ ಸ್ಥಾಪಿತ ಮಾಧ್ಯಮಗಳಾದ Disney, Viacom CBS, Warner Media ದಂತಹ ದೊಡ್ಡ ದೊಡ್ಡ ಸಂಸ್ಥೆಗಳು ಅವರ Content ಪ್ರಚಾರಕ್ಕೆ YouTube ಚಾನೆಲ್ ಸೃಜಿಸಿಕೊಂಡಿವೆ. YouTube ನಲ್ಲಿ ಎಷ್ಟು ಅತ್ಯುಪಯುಕ್ತ ವಿಡಿಯೋಗಳ ಲಭ್ಯತೆ ಇದೆಯೋ ಅಷ್ಟೇ ಪ್ರಮಾಣದ ಅನುಪಯುಕ್ತ ವಿಡಿಯೋಗಳೂ ಇವೆ. YouTubers ಎಂಬ ಕಣ್ಣೀರಿಡುವ ಮೊಸಳೆಗಳು ಹಾಗೂ Data Analytics ಎಂಬ ಕಾಣದ ಕೈ ವೀಕ್ಷಕರ ಅತ್ಯಮೂಲ್ಯ ಸಮಯವನ್ನು ದೋಚುತ್ತಿವೆ ಎಂದರೆ ತಪ್ಪಾಗಲಾರದು.

YouTubers ಎಂಬ ಕಣ್ಣೀರಿಡುವ ಮೊಸಳೆಗಳು.
ಬಹುತೇಕ ಜನರು ಲ್ಯಾಪಟಾಪ್, ಕಂಪ್ಯೂಟರ್, ಮೋಬೈಲ್ ಗೆ ಸಂಬಂಧಿಸಿದ ತೊಂದರೆಗಳಿಗೆ Google ಬಿಟ್ಟು YouTube ಮೊರೆ ಹೋಗುತ್ತಾರೆ ತಮ್ಮ ಸಮಸ್ಯೆಯನ್ನು ಬಗೆಹರಿಸುವ ವಿಧಾನದ ಅದೆಷ್ಟೋ ವಿಡಿಯೋಗಳು ಸಾಲುಗಟ್ಟಿ ನಿಲ್ಲುತ್ತವೆ. ಒಂದನ್ನು ಆಯ್ಕೆ ಮಾಡಿ ಪ್ರಾರಂಭಿಸಿದರೆ ಚಾನೆಲ್ ನ ಮಾಲೀಕ ವೀಕ್ಷಕರಿಗೆ ಸಮಸ್ಯೆಯ ಪರಿಹಾರ ಒದಗಿಸುವ ಮೊದಲು ತನ್ನ ಚಾನೆಲ್ ಗೆ Subscribe ಆಗಿ ಎಂದು ಕನಿಷ್ಠ ಒಂದು ನಿಮಿಷ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಾನೆ. ಆ ವಿಡಿಯೋದಲ್ಲಿ ಎಷ್ಟರ ಮಟ್ಟಿಗೆ ಪರಿಹಾರ ಸಿಗುತ್ತೋ ಗೊತ್ತಿಲ್ಲ ಚಾನೆಲ್ ಗೆ ವಿಕ್ಷಣೆ ಸಮಯ (Watch Time)ದ ಲಾಭ ಅಂತೂ ಸಿಕ್ಕೆ ಸಿಗುತ್ತೆ. ಈ ವಿಡಿಯೋ Satisfactory ಇಲ್ಲಾ ಅಂತ ಇನ್ನೊಂದು ವಿಡಿಯೋಗೆ Switch ಆಗ್ತೀರಾ ಅಲ್ಲೂ ಅದೇ ರಾಗ ಅದೇ ಹಾಡು.
YouTuber ಗಳು ತಮ್ಮ ಲಾಭಕ್ಕೆ ಏನೆಲ್ಲ ಕಸರತ್ತುಗಳು ಮಾಡುತ್ತಾರೆಂದರೆ ಇನ್ನು Officially Release ಆಗದೇ ಇರುವ ಎಷ್ಟೋ Most Awaited ಸಿನಿಮಾಗಳ ಟ್ರೇಲರ್ ಎಂದು Thumbnail ಕೊಟ್ಟು Upload ಮಾಡಿರುತ್ತಾರೆ. ಇಂತಹ ಚಾನೆಲ್ ಗಳ ಬಳಿ ಸುಳಿಯದಿದ್ದರೆ ಸಮಯದ ಪೋಲು ಕಡಿಮೆ ಮಾಡಬಹುದು.
Motivational ವಿಡಿಯೋಗಳು
ಒತ್ತಡ, ಒಂಟಿತನ, ಖಿನ್ನತೆಗಳ ಸುಳಿಗೆ ಸಿಲುಕಿದವರು Motivational Video ಗಳ ಮೊರೆ ಹೋಗುತ್ತಾರೆ. ವೈಜ್ಞಾನಿಕ ಸಂಶೋಧನೆಯ ಪ್ರಕಾರ Motivational Video ಗಳನ್ನು ನೋಡುವ ಸಂಧರ್ಬದಲ್ಲಿ ಉಂಟಾಗುವ ಪ್ರೇರಣೆ ತಾತ್ಕಾಲಿಕವಾದ್ದು. ಒಂದು Category ವಿಡಿಯೋಗಲನ್ನು ತಾವು ಹೆಚ್ಚಾಗಿ ವೀಕ್ಷಿಸುತ್ತಿದ್ದರೆ ಅದೇ Category ವಿಡಿಯೋಗಳು ತಮ್ಮ ಮುಂದೆ ಸಾಲುಗಟ್ಟಿ ನಿಲ್ಲುವಂತೆ ಮಾಡುತ್ತೆ Data Analytics ಎಂಬ ಕಾಣದ ಕೈ. ಒಂದು ಸಂಶೋಧನೆಯ ಪ್ರಕಾರ YouTube ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ನಿಮಗೆ ಇಷ್ಟವಾಗುವ Posts, Videos ಗಳನ್ನು Browse ಮಾಡುತ್ತ ಹೋದಂತೆ Dopamine ಎಂಬ ನರಪ್ರೇಕ್ಷಕ (Neurotransmitter) ನಮ್ಮ ಮೆದುಳಿನಲ್ಲಿ Feel of Pleasure ಅಥವಾ Accomplishment ಭಾವವನ್ನು ಉದ್ರೇಕಿಸುತ್ತದೆ, ಇದರ ಪುನರಾವರ್ತನೆ ಸಾಮಾಜಿಕ ಜಾಲತಾಣದ ವ್ಯಸನಿಯಾಗಿಸುತ್ತದೆ.
ಕೊನೆಯದಾಗಿ:
YouTube ಸೃಜನಶೀಲತೆಯನ್ನು ಪರಿಚಯಿಸಲು ಒಳ್ಳೆಯ ಮಾಧ್ಯಮವೇ ಆದರೇ ಕೆಲವು YouTuber ಗಳು ತಮ್ಮ ಸ್ವಾರ್ಥಕ್ಕಾಗಿ ವೀಕ್ಷಕರ ಗಮನ ಬೇರೆಡೆ ಸೆಳೆಯುವಂತ ಕೆಲಸ ಮಾಡುತ್ತಿರುತ್ತಾರೆ. ಅಸಂಬದ್ಧ ವಿಡಿಯೋಗಳ ವಿಕ್ಷಣೆ ಇನ್ನೊಬ್ಬರ ಲಾಭ ಹಾಗೂ ನಮ್ಮ ಸಮಯಹರಣ ಆಗದಿರಲಿ ನಮ್ಮ ಮನರಂಜನೆಗೆ ಅತಿ ಹೆಚ್ಚಾಗಿ ಬಳಸಲ್ಪಡುವ YouTube ನ ಸರಿಯಾದ ಬಳಕೆಯಾಗಲಿ ಎನ್ನುವುದೇ ಇಲ್ಲಿನ ಆಶಯ.






YouTube ಸಾಮಾಜಿಕ ಜಾಲತಾಣದ ಒಳಿತು ಕೆಡಕುಗಳ ಕುರಿತಾಗಿ ಸರಿಯಾಗಿ ವಿಶ್ಲೇಷಣೆ ಮಾಡಿದ್ದೀರಿ
The struggle behind your fact research is REAL