ಪ್ರಥಮ ನುಡಿಗಳು
- Krishnakesari K
- Jun 3, 2021
- 1 min read
ವಿಶಾಲವಾದ ಬರವಣಿಗೆಯ ಪ್ರಪಂಚಕ್ಕೆ ಒಬ್ಬ ಸಣ್ಣ ಪಾಲುದಾರನಾಗಿರಬೇಕೆಂಬ ಮಹದಾಸೆ ವರ್ಷಗಳಿಂದ ಹಾತೊರೆಯುತ್ತಿತ್ತು. ʼಸಾಮಾಜಿಕ ಜಾಲತಾಣಗಳʼ ಅಬ್ಬರದಲ್ಲಿ ಬರಹಗಾರರಿಗೆ ಮನ್ನಣೆ ಮರಿಚೀಕೆ ಎಂಬ ಋಣಾತ್ಮಕ ಅಂಶ ಅದೆಷ್ಟೋ ಬಾರಿ ಹಿಂದೇಟು ಹಾಕಿಸಿತು. ಆದರೂ ವಿಜ್ಞಾನ ತಂತ್ರಜ್ಞಾನ ಬೆಳೆಯಲೂ ಸಹ ಅದರ ಹಿಂದೆ ಬರಹದ ಪರಿಶ್ರಮ ಇರಲೆಬೇಕು. ಒಂದು Mobile App ಆವಿಷ್ಕಾರ ಹೊಂದಿ ಲಕ್ಷಾಂತರ ಬಳಕೆದಾರರನ್ನು ಹೊಂದುತ್ತದೆಂದರೆ, ಮೊದಲಿಗೆ ಅದರ Programming, Algorithm (ಕ್ರಮಾವಳಿ)ಗಳು ಒಂದು ಹಾಳೆಗೆ ಬರಹ ರೂಪದಲ್ಲಿಯೆ ಇಳಿದಿರುತ್ತದೆ. "ಓದು" ಎನ್ನುವುದು ಒಂದು "ತಪಸ್ಸು" ಎಲ್ಲರಿಗೂ ಅದು ಅಸಾಧ್ಯವಾದ ಮಾತು. "ತಪಸ್ವಿ"ಗಳು ಅಸಾಧಾರಣರು. ಓದಿನ ಹಸಿವನ್ನು ನೀಗಿಸಿಕೊಳ್ಳಲು ಓದುಗ ಎಲ್ಲಿಯಾದರೂ ಹುಡುಕಿ ಓದಿ ಹಸಿವು ನೀಗಿಸಿಕೊಳ್ಳುತ್ತಾನೆ.

ಬ್ಲಾಗ್ ನಲ್ಲಿ ಚರ್ಚಿತವಾಗುವ ವಿಷಯಗಳು ಸಂಶೋಧನಾಧಾರಿತವಾಗಿರುವವು, ಪ್ರಸಕ್ತ ತಂತ್ರಜ್ಞಾನಿಕ ಆವಿಷ್ಕಾರಗಳ ಸಾಧಕ/ಭಾಧಕಗಳು, ಕೆಲವೊಂದಿಷ್ಟು ಅಭಿಪ್ರಾಯಗಳು. ಅಭಿಪ್ರಾಯಗಳು ಕೇವಲ ಅಭಿಪ್ರಾಯಗಳಷ್ಟೆ ಯಾವುದೇ ವ್ಯಕ್ತಿ, ಸಂಸ್ಥೆಗಳ ಅಪಖ್ಯಾತಿ ಬರಹದ ಉದ್ದೇಶವಾಗಿರುವುದಿಲ್ಲ. ಸಂಶೋಧನಾಧಾರಿತ ಲೇಖನಗಳ ಸತ್ಯಾಸತ್ಯತೆಯನ್ನು ಪರಿಗಣಿಸಿ, ಸಾಮಾಜಿಕ, ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಗೆ, ಮಾನವೀಯ ಮೌಲ್ಯಗಳಿಗೆ ಧಕ್ಕೆ ತರುವಂತಿದ್ದರೆ ಅದು ರಾಷ್ಟ್ರದ ದುರದೃಷ್ಟಕರ ಬೆಳವಣಿಗೆ ಎನ್ನಬಹುದು.






Nice bro all the best🥰🥰
Good👌👌
Very wel came out... Don't stop here
Congo on your first blog @krishnakesari @prabhuwritessince2021